ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 ಅಭಿಯೋಗ ಇಲಾಖೆಯ ಬಗ್ಗೆ

   ಮಾನ್ಯ ಕಾನೂನು ಆಯೋಗದ ವರದಿಯ ಆಧಾರದ ಮೇರೆಗೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು  ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಲಾ:114:ಎಲ್ ಎಜಿ:1972, ದಿನಾಂಕ: 30.12.1972 ಹಾಗೂ ಕಾನೂನು ಇಲಾಖೆಯ ಆದೇಶ ಸಂಖ್ಯೆ:ಲಾ:15:ಪಿಪಿಇ: 1972, ದಿನಾಂಕ : 20.03.1973ರ ಆದೇಶದಂತೆ , ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು ಸ್ಥಾಪನೆಗೊಂಡು, ಪೊಲೀಸ್‌ ಇಲಾಖೆಯ ನಿಯಂತ್ರಣದಲ್ಲಿತ್ತು,  ನಂತರದಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು  ಮಾನ್ಯ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಡಿಸಿಎ:7: ಎಆರ್ ಬಿ: 2004, ದಿನಾಂಕ: 22.09.2004 ರಂತೆ ಕಾನೂನು ಇಲಾಖೆಯಿಂದ ಗೃಹ ಇಲಾಖೆಯ ನಿಯಂತ್ರಣಕ್ಕೆ ಒಳಪಟ್ಟಿತು.

   

          ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು ಕೇಂದ್ರ ಕಛೇರಿ, ಕಾವೇರಿ ಭವನ, ಕೆ.ಹೆಚ್.ಬಿ. ಕಾಂಪ್ಲೆಕ್ಸ್. 6ನೇ ಮಹಡಿ, ಕೆಂಪೇಗೌಡ ರಸ್ತೆ,ಬೆಂಗಳೂರು, ಇಲ್ಲಿಂದ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ.  

ಇಲಾಖೆಯ ಮುಖ್ಯ  ಅಧಿಕಾರಗಳು ಮತ್ತು ಕಾರ್ಯಗಳು:

1. ಇಲಾಖೆಯು ಸರ್ಕಾರದ ಪರವಾಗಿ ಅಪರಾಧ ಪ್ರಕರಣಗಳಲ್ಲಿ ಮ್ಯಾಜಿಸ್ರ್ಟೇಟ್‌ ಮತ್ತು ಸತ್ರ ನ್ಯಾಯಾಲಯಗಳ ಮುಂದೆ   ಅಭಿಯೋಜನಾ ಕಾರ್ಯವನ್ನು ಕೈಗೊಳ್ಳುತ್ತದೆ.

2. ಆರೋಪಗಳುಸಾಬೀತು ಆಗಿಲ್ಲವೆಂದು ಆರೋಪಿಗಳು ಬಿಡುಗಡೆಗೊಂಡ  ಮತ್ತು ಆರೋಪ  ಹೊರಿಸುವುದಕ್ಕೆ ಮೊದಲೇ ವಿಮುಕ್ತಿಗೊಳಿಸಲಾದ ಕ್ರಿಮಿನಲ್‌ ಪ್ರಕರಣಗಳ ತೀರ್ಪುಗಳು /ಆದೇಶಗಳನ್ನು ಪರಿಶೀಲಿಸಿ ಮೇಲ್ಮನವಿ / ಪುನರ್‌   ಪರಿಶೀಲನೆ  ಅರ್ಜಿಗಳನ್ನು ಸಲ್ಲಿಸುವ ಬಗ್ಗೆ ಅಭಿಪ್ರಾಯ ದಾಖಲಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು.

3.ಸಿವಿಲ್‌ ಜಡ್ಜ್‌ ನ್ಯಾಯಾಲಯದಮುಂದೆ ಸರ್ಕಾರವು ಪಕ್ಷಕಾರರಾಗಿರುವ ಪರ / ವಿರುದ್ಧ ಸಿವಿಲ್‌ ಪ್ರಕರಣಗಳ ಅಭಿಯೋಜನೆ   ಕಾರ್ಯವನ್ನು ಕೈಗೊಳ್ಳುವುದು.

4.ಮೇಲ್ಕಂಡನ್ಯಾಯಾಲಯಗಳಮುಂದೆ ಅಭಿಯೋಜನೆಗೆ ಸಂಬಂಧಪಟ್ಟ ಕ್ರಿಮಿನಲ್‌ಸರ್ಕಾರಿ  ವ್ಯಾಜ್ಯಗಳನ್ನು ಅಭಿಯೋಜನೆಗೆ   ಒಳಪಡಿಸುವುದಕ್ಕೆ ಸಂಬಂಧಿಸಿದ ಇನ್ನಿತರ/ಪೂರಕ ಕಾರ್ಯಗಳನ್ನು  ಕೈಗೊಳ್ಳುವುದು.

  

 ಸಾರ್ವಜನಿಕರಿಗೆ ಒದಗಿಸುವ ಸೌಲಭ್ಯಗಳು

     ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅಧಿನಿಯಮ, 2005ರ ಉಪಬಂಧಗಳನ್ವಯ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸುವುದು.

 

ಇತ್ತೀಚಿನ ನವೀಕರಣ​ : 24-03-2022 05:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080